Wednesday, June 24, 2015

ಹೊರಟೆನೆಂದರೆ ತಡೆಯಲಿ ಹ್ಯಾಂಗ? A Travel Article in Udayavani Kannada Daily

When my friend P.K. from Udayavani, a popular daily in the state, asked me to write something on travel in Kannada, I was rather wary. Apprehension doesn't cover the feeling either. I have been asked to do this before by other friends, but I have always managed to shy away from it. P was persistent, having more faith in me than I ever would, I thank her for it.

My apprehension is not just because my hold on the language leaves much to be desired. It is a continuing regret, that I cannot write as well in my mother tongue as I can in English. But, that said, this was a fun thing to do, though it took me a large part of the day to type it out. 

Now they want me to write more. Err...ummm...well...

Anyway, so this might be a start! For the non-Kannada readers here, this is an article on travelling alone, why I do it, etc. The photo? Very 'me', I thought. Read the article here on the Udayavani website or see below.  The article is the lead today in the Avalu supplement.

(The below text is likely to have typos.)

ಹೊರಟೆನೆಂದರೆ ತಡೆಯಲಿ ಹ್ಯಾಂಗ?



ಒಂದಾನೊಂದು ಕಾಲದ ಕಥೆ ಇದು. ಭಾರತದ ಸಹಸ್ರಾರು ಹಳ್ಳಿಗಳ ಮಧ್ಯೆ ಒಂದು ಪುಟ್ಟ ಪಟ್ಟಣವಾದ ಮಡಿಕೇರಿಯಲ್ಲಿ ಒಬ್ಬಳು ಹುಡುಗಿ. (ಆಫ್ ಕೋರ್ಸ್ ನಾನೇ ಆ ಹುಡುಗಿಎನ್ನಬೇಕಿಲ್ಲ) ಎಲ್ಲೋ, ಯಾರಿಂದಲೋ ಕೇಳಿದ ನೆನಪು, ಪಾದದ ಅಡಿಯಲ್ಲಿ ಮಚ್ಚೆ ಇದ್ದರೆ ಕಾಲಿಗೆ ಚಕ್ರ ಕಟ್ಟಿದ ಹಾಗೆ ಎಂದು. ನನ್ನ ಎಡಗಾಲಿನ ಅಡಿಯಲ್ಲಿ ಮಚ್ಚೆ ಇರಬೇಕಾದರೆನನ್ನೆದೇನು ತಪ್ಪಿಲ್ಲ, ಟ್ರಾವೆಲ್ ಮಾಡಲು, ತಿರುಗಲು, ಸುತ್ತಾಡಲು ಬೇರೆ ಕಾರಣ ಬೇಕಿಲ್ಲ, ಎಂದು ಸುಮಾರು ವರ್ಷಗಳ ಹಿಂದೆ ನಿರ್ಧರಿಸಿದ್ದೆ.

ನನಗೆ 'ಟ್ರಾವೆಲ್ ಬಗ್' ಹಿಡಿದದ್ದು ಯಾವಾಗ ಎಂದು ಅಷ್ಟು ಸರಿಯಾಗಿ ನೆನಪಿಲ್ಲ. ಕೆಲ ತಿಂಗಳುಗಳ ಮಗುವಾಗಿದ್ದಾಗ ಒಂದು ಬೆಡ್ ಶೀಟಿನ ಮೇಲೆ ಅಂಗಳದಲ್ಲಿ ಹರಿದಾಡಲು ಬಿಟ್ಟು ಮರ,ಹಕ್ಕಿ ತೋರಿಸಿ ಕಥೆ ಹೇಳಿದ ಅಮ್ಮ, ಅಜ್ಜಿಯಿಂದ ಬಂತೇನೋ ಎಂದು ಅನಿಸುತ್ತದೆ. ಅಥವಾ ಬೇಸಿಗೆಯ ರಜದಲ್ಲಿ ಜಿಲ್ಲಾ ಗ್ರಂಥಾಲಯಕ್ಕೆ ಹೋಗಲು ವಾರಕ್ಕೊಂದು ಹೊಸ ರೂಟ್ಹಿಡಿದಾಗ ಅಂಟಿಕೊಂಡಿತೋ ತಿಳಿಯದು. ಬಹುಶ ಡಿಗ್ರಿ ರಿವಿಶನ್ ರಜೆಯಲ್ಲಿ ಪರೀಕ್ಷೆಯ ಹಿಂದಿನ ದಿನ ಅಪ್ಪ ಅಮ್ಮನ ಜೊತೆ ಟ್ರೆಕಿಂಗ್ ಹೋದ, ಬೆಟ್ಟದ ತುದಿಯಿಂದ ಕಾಣುವ ಅದ್ಭುತವ್ಯೂಗಳನ್ನು ಕಣ್ಣಲೆ ಇಟ್ಟುಕೊಂಡು ಈಗಲೂ ಟ್ರಾಫಿಕ್ ಮದ್ಯದಲ್ಲಿರುವಾಗ ನೆನೆಸಿಕೊಳ್ಳುವಾಗ ರೆಜುವೆನೆಟ್ ಆಗುವ ಟ್ರಾವೆಲ್ ಪ್ರೇಮ ಇದಿರಬೇಕು.

ಅಣ್ಣ-ಅಕ್ಕ-ತಂಗಿ-ತಮ್ಮ ಇಲ್ಲದೆ ಒಬ್ಬಳೆ ಬೆಳೆದ ನನಗೆ ಮಂಗಳೂರು ವಿಶ್ವವಿದ್ಯಾನಿಲಯದ ಹಾಸ್ಟೆಲ್ ಒಂದು ರೆವೆಲೆಶನ್ ಆಗಿದ್ದರೂ ಪ್ರತೀ ೩-೪ ವಾರಕ್ಕೆ ಒಮ್ಮೆ ಕ್ಲಾಸ್ತ್ರೋಫೋಬಿಕ್ಅನಿಸುತಿದುದು ನೆನಪಿದೆ. ರೂಂಮೇಟಿಗೆ ಹೇಳಿ ಬೆಳಗ್ಗಿನ ಜಾವ ಹೊರಟು ಕಾರ್ಕಳ, ಮೂಡುಬಿದ್ರೆ, ಉಡುಪಿ, ವೆಣೋರು ಹೀಗೆ ಅಕ್ಕ ಪಕ್ಕದ ಊರು ನೋಡಿ, ದಿನವಿಡಿ ನಡೆದು, ನಡೆದುಸುಸ್ತಾಗಿ ಲಾಸ್ಟ್ ಬಸ್ ಹಿಡಿದು ಬರುತ್ತಿದ್ದೆ. ಆಗಿನ ವರ್ಷಗಳಲ್ಲಿ ಅದು ನನ್ನ 'ಮಿ-ಟೈಮ್', ತಲೆಯಲ್ಲಿ ಇರುವ ವಿಪರೀತ ವಿಷಯಗಳ ಸದ್ದಿನಿಂದ ಒಂದು ದಿನದ ಮಟ್ಟಿಗಿನ ಬ್ರೇಕ್. ಅಲ್ಲಿಂದಹಿಡಿದ ಒಬ್ಬಳೆ ಟ್ರಾವೆಲ್ ಮಾಡುವ ಹುಚ್ಚು (ಅಮ್ಮ ಬಳಸುವ ಪದ) ಇನ್ನು ಅಂದಿನಷ್ಟೇ ಇದೆ. ಬುದ್ದಿ ಬೆಳೆದಂತೆ, ಪ್ರಾಯವಾದಂತೆ ಅಲ್ಲಿ ಇಲ್ಲಿ ಸ್ವಲ್ಪ ಮಟ್ಟಿಗೆ ಬದಲಾಗಿದೆ, ಸೇಫ್ಟಿವಿಷಯದಲ್ಲಿ, ಇತ್ಯಾದಿ. ಅದನ್ನು ಹೊರತು ಪದೆಸಿದರೆ, ಒಬ್ಬಳೇ ಟ್ರಾವೆಲ್ ಮಾಡುವುದರಲ್ಲಿ ಇರುವ ತೃಪ್ತಿ, ಥ್ರಿಲ್, ಆ ಅಡ್ರಿನಾಲಿನ್ ರಶ್ ಎಂಬುದು ಬೆಸ್ಟ್ ಫ್ರೆಂಡ್, ಬಾಯ್ ಫ್ರೆಂಡ್,ಮಕ್ಕಳು, ಇತರೆ ಫ್ಯಾಮಿಲಿ, ಯಾರ ಜೊತೆಗೂ ಹೋಗುವುದರಲ್ಲಿಲ್ಲ ಎಂಬುವ ನನ್ನ ಅಭಿಪ್ರಾಯ ಕಿಂಚಿಸ್ಟು ಬದಲಾಗಲಿಲ್ಲ.

ಒಬ್ಬರೇ, ಅದರಲ್ಲೂ ಒಬ್ಬ ಹುಡುಗಿ ಟ್ರಾವೆಲ್ ಮಾಡುವುದರಲ್ಲಿ ಇರುವ ರಿಸ್ಕ್ ಗಳ ಬಗ್ಗೆ ಎಲ್ಲರಿಗೂ ಗೊತ್ತಿರುವಂತದ್ದೇ. ಇದೊಂದು 'ನೋ ಕಂಟ್ರಿ ಫಾರ್ ಸಿಂಗಲ್ ವಿಮೆನ್.' ಕತ್ತಿನಲ್ಲಿ ಒಂದುತಾಳಿ, ಕೈಯಲ್ಲಿ ಒಂದು, ಎರಡು ಮಕ್ಕಳಿಲ್ಲದಿದ್ದರೆ ಬೆಂಗಳೂರಿನಂತಹ ನಗರದಲ್ಲೇ ಜನರ ನೋಡುವ ದೃಷ್ಟಿ ಸದಾ ಬದಲಾಗುತ್ತಲೇ ಇರುತ್ತದೆ. ಇನ್ನು ಬೆನ್ನಿಗೆ ಒಂದು ಬ್ಯಾಕ್ ಪ್ಯಾಕ್ ,ಕಾಲುಗಳಲ್ಲಿ ವಾಕಿಂಗ್ ಶೂಸ್, ಒಂದು ಕ್ಯಾಮೆರಾ, ಪೆನ್, ನೋಟ್ ಬುಕ್ ಹಿಡಿದು ಬಸ್, ಟ್ರೈನ್, ಪ್ಲೇನ್ ಹತ್ತುವ ಹೆಣ್ಣುಮಗಳನ್ನು ಜವಾಬ್ದಾರಿ ಇಲ್ಲದ, ಹೇಳುವವರು - ಕೇಳುವವರು ಇಲ್ಲದಪಶ್ಚಿಮ ಶೈಲಿಯ ಹಿಪ್ಪಿ ಎಂದು ಪರಿಗಣಿಸುವವರು ನಮ್ಮ ಪಕ್ಕದ ಸೀಟ್ ನಲ್ಲಿಯೇ ಕುಳಿತಿರುತ್ತಾರೆ. ಆದರೆ, ಜನರು ಯೋಚಿಸುವುದರ ಬಗ್ಗೆ ನಾವು ಯೋಚಿಸುತ್ತಾ ಇದ್ದರೆ ಯಾವುದೇಕೆಲಸವನ್ನು ಮಾಡಲು ಸಾದ್ಯವಿಲ್ಲ ಎಂಬುದು ಎಷ್ಟೋ ವರ್ಷಗಳ ಹಿಂದೆ ಕಲಿತ ಅತ್ಯಾವಶ್ಯಕ ಪಾಠಗಳಲ್ಲಿ ಒಂದು. ಜನರು ಹೇಳುತ್ತಲೇ ಇರುತ್ತಾರೆ, ಅವರದ್ದೇ ಆದ ಅಭಿಪ್ರಾಯ, ಕಥೆ,ನಿಯಮ ಕಟ್ಟುತಲೇ ಇರುತ್ತರೆ. ವಾರಣಾಸಿಯಲ್ಲಿ ಗಂಗಾ ನದಿಯಲ್ಲಿ ಮುಸ್ಸಂಜೆಯ ಹೊತ್ತಿನಲ್ಲಿ ಗಂಗಾ ಆರತಿಯ ಗುಂಗಿನಲ್ಲಿರುವಾಗ, ಕಾಂಚನಜುಂಗದ ಮೇಲೆ ಮೂಡುತ್ತಿರುವ ಸೂರ್ಯನಮೊದಲ ಕಿರಣಗಳು ಬೇಳುತ್ತಿರುವುದನ್ನು ಬೆಳಗ್ಗಿನ ವಾಕ್ ಮಾಡುತ್ತಾ ನೋಡುವಾಗ ಆ 'ನಾಲ್ಕು ಜನರು' ಏನು ಹೇಳುತ್ತಾರೆ ಎಂಬುದು ಡಸ್ ನಾಟ್ ರಿಯಲಿ ಮ್ಯಾಟರ್. ಅಲ್ವಾ?

ಇಂಟರ್ ನೆಟ್, ಎಲ್ಲಿಲ್ಲಿಯೂ ಸಿಕ್ಕುವ ಮೊಬೈಲ್ ನೆಟ್ವರ್ಕ್ ಗಳಿಂದಾಗಿ ಈಗೀಗ ಅದೆಷ್ಟೋ ಸುಲಭ, ಒಂದು ರೀತಿಯಲ್ಲಿ ಬೋರಿಂಗ್ ಆಗಿದೆ ಟ್ರಾವೆಲ್. ಅದೆಷ್ಟೋ ಸೇಫ್ ಕೂಡ ಆಗಿದೆ.ಒಬ್ಬೊಬ್ಬರೇ ಟ್ರಾವೆಲ್ ಮಾಡುವಾಗ ಓದಲು ಪುಸ್ತಕ, ಬ್ಯಾಗಿನಲ್ಲಿ ಐಪಾಡ್ ಇದ್ದರೂ ಕಂಪನಿ ಬೇಕು ಎಂದೆನಿಸುವುದು ಸಹಜ. ಲೋಕಲ್ ಯಾರದ್ದಾದರೂ ಪರಿಚಯ ಇದ್ದಿದ್ದರೆ ಎಂದುಅನಿಸುತ್ತದೆ, ಅವರು ಅಲ್ಲಿನ ಬೆಸ್ಟ್ ಬಿರಿಯಾನಿ ಎಲ್ಲಿ ಸಿಗುತ್ತದೆ, ಕಡಿಮೆ ಬೆಲೆಯಲ್ಲಿ ಶಾಪಿಂಗ್ ಎಲ್ಲಿ ಮಾಡಬಹುದು, ಹೀಗೆ ಲೋಕಲ್ ಸೀಕ್ರೆಟ್ ಗಳನ್ನು ಹೇಳುತ್ತಿದರು ಎಂದೆನಿಸುತ್ತದೆ. ಹೀಗೆಟ್ರಾವೆಲ್ ಮಾಡುವ (ಟೂರಿಸ್ಟ್ ಅಲ್ಲ, ಟ್ರಾವೆಲ್ ಮತ್ತು ಟೂರಿಸಂ ಮದ್ಯೆ ಇರುವ ಅಂತರ ಬಹಳ ದೊಡ್ದದು) ಅದೆಷ್ಟೋ ಜನರು ಯೋಚಿಸಿರಬೀಕು. ಅದರಿಂದ ಎಲ್ಲೋ ಪ್ರೆರಿರತವಾಗಿಹುಟ್ಟಿಕೊಂಡ ವೆಬ್ ಸೈಟ್ Couchsurfing. ಒಂದು ಅತಿ ಸರಳ ಕಾನ್ಸೆಪ್ಟ್. ಮನೆಗಳಲ್ಲಿ ಸ್ವಲ್ಪ ಜಾಗವಿದ್ದರೆ ಯಾವುದೋ ಯಾತ್ರಿಕನಿಗೆ ಮಲುಗಲು ಹಾಸಿಗೆಯಾಗುತ್ತದೆ. ನಿಮಗೆ ಒಬ್ಬಹೊಸ ಫ್ರೆಂಡ್, ಅದ್ಯಾವುದೋ ದೇಶದಿಂದ ಬಂದ, ಏನೇನೋ ಕಥೆಗಳನ್ನು ತರುವ ಒಬ್ಬ ಫ್ರೆಂಡ್. ಅವರಿಗೆ ಹೊಸ ಊರಿನಲ್ಲಿ, ಲೋಕಲ್ ಭಾಷೆ, ಸಂಸ್ಕುತಿಯ ಪರಿಚಯ ನೀಡಬಲ್ಲಇನ್ನೊಬ್ಬ ಫ್ರೆಂಡ್. ಎಲ್ಲವೂ ಫ್ರೀ!

Couchsurfing ವೆಬ್ ಸೈಟಿನಲ್ಲಿ ರಿಜಿಸ್ಟರ್ ಮಾಡಿ, ಪ್ರೊಫೈಲ್ ಮಾಡಿ, ನಮ್ಮ ಆಸಕ್ತಿ, ಹವ್ಯಾಸ, ಇತ್ಯಾದಿ ವಿವರಗಳನ್ನು ಬರೆದು, 'ಕೌಚ್' ಇದ್ದರೆ, ಅದರ ವಿವರಗಳನ್ನು ತುಂಬಬೇಕಾಗುತ್ತದೆ. ಎಷ್ಟು ಜನರನ್ನು 'ಹೋಸ್ಟ್' ಮಾಡಬಹುದು, ಬರೀ ಹುಡುಗರು, ಬರೀ ಹುಡುಗಿಯರು, ಮಿಕ್ಸೆಡ್ ಗುಂಪು, ಇತ್ಯಾದಿ ಪ್ರಿಫರೆನ್ಸಸ್ ಹಾಕಬಹುದು. ಅಥವಾ ಬರೀ ನಿಮ್ಮಊರನ್ನು ತೋರಿಸಲು ಸಮಯ ನೀಡಬಹುದು, ಒಂದು ಕಾಫಿ, ಒಂದು ಡ್ರಿಂಕ್ ಗೆ ಸಿಗುತ್ತೇನೆ ಎನ್ನಬಹುದು. ಆಸಕ್ತರು ನಿಮಗೆ ಮೆಸೇಜ್ ಕಳಿಸಿ, ಇಬ್ಬರಿಗೂ ಸರಿಕಟ್ಟಾದರೆ ನಿಮ್ಮ ಕೌಚ್ಅವರಿಗೆ ನೀಡಲು ಒಪ್ಪಬಹುದು. ಬದಲಿಗೆ ಹೊಸ ಪರಿಚಯ, ಒಳ್ಳೆ ಅಡ್ವೆಂಚರ್. ಊಟದ ವ್ಯವಸ್ತೆ ನೀದಬೇಕೆಂದಿಲ್ಲ, ನಿಮ್ಮ ಅನುಕೂಲಕ್ಕೆ ಬಿಟ್ಟ ವಿಷಯ. ನೀವು ಟ್ರಾವೆಲ್ ಮಾಡುವಾಗಅದ್ಯಾವುದೋ ಊರು, ಬೇರೆಯಾವುದೋ ದೇಶದಲ್ಲೂ ಇಂತಹ Couchsurfing ಹೋಸ್ಟ್ ಗಳನ್ನು ಹುಡುಕಬಹುದು. ಪ್ರಪಂಚದಾದ್ಯಂತ ಹರಡಿರುವ ಇಂತಹಾ Couchsurfers ದೊಡ್ಡನಗರಗಳಿಂದ ಹಿಡಿದು ಮೂಲೆ ಮೂಲೆಯ ಹಳ್ಳಿಗಳಲ್ಲಿಯೂ ಇರುತ್ತಾರೆ.
ನಾನು ಹಲವು ವರ್ಷಗಳಿಂದ ಇದರ ಮೆಂಬರ್. ಕೆಲ ವರ್ಷಗಳ ಹಿಂದೆ ಗೋವಾ ಹೋಗುವ ಪ್ಲಾನ್ ಇದ್ದು, ಕೈಯಲ್ಲಿ ಹೆಚ್ಚು ಹಣವಿಲ್ಲದಿದ್ದಾಗ ಈ Couchsurfing ಟ್ರೈ ಮಾಡಬಹುದೇನೋಎಂದು ಅನಿಸಿತ್ತು. ಪೀಟರ್ ಮತ್ತು ರೋಸಿಯ ಮನೆ ಕಲಂಗುಟ್ ಬೀಚಿನ ಹತ್ತರೆ ಇದ್ದು ಒಂದು ದೊಡ್ಡ ರೂಂ, ಸುಂದರ ಅಂಟಿಕ್ ಮಂಚ, ದೊಡ್ಡ ಫ್ರೆಂಚ್ ಕಿತಕಿಗಳಿರುವ ವಿಶಾಲ ರೂಂನಮಗೆ ಮೀಸಲಾಗಿತ್ತು. ನಾವು ಅವರಿಗೆ ಒಂದು ದಿನ ಡಿನ್ನರ್ ಮಾದಿದ್ದೆವು. ಪೀಟರ್ ಪ್ರಾಣಿಕ್ ಹೀಲಿಂಗ್ ಬಗ್ಗೆ, ಅವರು ರಿಸ್ಟೋರ್ ಮಾಡುತ್ತಿದ ಹಳೆಯ ಪೋರ್ಚುಗೀಸ್ ಮನೆಯ ಬಗ್ಗೆ,ಟೆರೇಸ್ ಮೇಲೆ ಬೆಳೆಯುತ್ತಿದ ಗಿಡಗಳ ಬಗ್ಗೆ ಅದೆಷ್ಟೋ ಕಥೆಗಳನ್ನು ಹೇಳಿದ್ದ.

Couchsurfing ಕಮ್ಯೂನಿಟಿ ನಡೆಸುವ ವೆಬ್ ಸೈಟ್ ಆದ ಕಾರಣ ರಿಸ್ಕ್ ಕಡಿಮೆಯಾಗುತ್ತದೆ. ಅದರೂ, ಇದು ವಿಶೇಷವಾಗಿ ಹೇಳಬೇಕಿಲ್ಲ, ನಮ್ಮ ಜಾಗ್ರತೆಯಲ್ಲಿ ಇರುವುದು ನಮಗೆಬಿಟ್ಟಿದ್ದು. ಕಡಿಮೆ ಬಜೆಟ್ ಇಟ್ಟುಕೊಂಡು, ಕೇವಲ ಪ್ರತಿಯೊಂದು ಊರಿನಲ್ಲಿ ಗೈಡ್ ಪುಸ್ತಕದಲ್ಲಿ ಇರುವ ಜಾಗಗಳನ್ನು ಮಾತ್ರ ನೋಡದೆ, ಸ್ವಲ್ಪ ಭಿನ್ನವಾಗಿ ಟ್ರಾವೆಲ್ ಮಾಡಬೇಕೆಂದುಇರುವುದಾದರೆ ಈ Couchsurfing ಟ್ರೈ ಮಾಡಬಹುದು. ಹೀಗೆ ಹೋಟೆಲ್ ಅಲ್ಲದೆ ಸ್ವಲ್ಪ ಭಿನ್ನವಾಗಿರುವ ಟ್ರಾವೆಲ್ ಗೆ Airbnb ಮತ್ತು ಇನ್ನಿತರ ವೆಬ್ ಸೈಟ್ ಗಳು ಸೇರಿದರು ಅವು Couchsurfingನ ಹಾಗೆ ಫ್ರೀ ಇರುವುದಿಲ್ಲ.

ಸ್ವಲ್ಪ ಜಾಗ್ರತೆ, ಕಾಮನ್ ಸೆನ್ಸ್ ವಹಿಸಿ, ವಿಪರೀತ ರಿಸ್ಕ್ ತಗೊಳ್ಳದೆ ಇದ್ದರೆ ಒಬ್ಬೊಬರೆ ಪ್ರಯಾಣ ಮಾಡುವ ಸಂತೋಷವೇ ಬೇರೆ. ನಮ್ಮನು ನಾವು ಕಂಡುಕೊಳ್ಳುವ, ನಮ್ಮನು ನಾವುಸರಿಯಾಗಿ ಅರ್ಥ ಮಾಡಿಕೊಳ್ಳುವ ಅವಕಾಶ ದೊರೆಯುತ್ತದೆ. ಒಬ್ಬರೇ ಇರುವಾಗ ನಮ್ಮ ಪರಿಸರದ ಬಗ್ಗೆ ನಾವು ಇನ್ನಷ್ಟು ಸೆನ್ಸಿಟಿವ್ ಆಗುತ್ತೇವೆ. ನಮ್ಮ ಅಂತರಾಳದ ಮಾತನ್ನು ಕೇಳಲುಆ ಒಂದು ನಿಶಬ್ಧ ಇರುತ್ತದೆ. ನಮ್ಮ ಲಿಮಿಟ್ ಏನು, ನಾವು ಎಲ್ಲಿಯವರೆಗೆ ಹೋಗಲು ತಯರಾಗಿರುತ್ತೇವೆ ಎನ್ನುವ ಅರಿವು ಮೂಡುತ್ತದೆ. ಮನೆಗೆ ಹಿಂತಿರುಗಿದ ಮೇಲೆ, ಫೋಟೋಸ್ ನೊಡಿ,ಎಲ್ಲರಿಗು ಪ್ರಯಾಣದ ಕಥೆಗಳನ್ನು ಹೇಳಿದ ನಂತರ ಇರುಳು ಮಲಗುವ ಮುನ್ನ ಅದೊಂದು ಒಮ್ಮೆಲೆ ಅನಿಸುತ್ತದೆ - ನಾವು ಅದೆಷ್ಟು ಸ್ಟ್ರಾಂಗ್ ಆಗಿದ್ದೇವೆ ಎಂದು.

ಇನ್ನೇನು ಆಗುಸ್ಟ್ ತಿಂಗಳು ಹತ್ತಿರ ಬರುತ್ತಿದೆ. ವಿಯೆಟ್ನಾಂ, ಕಾಂಬೋಡಿಯಾ, ಇತ್ಯಾದಿ ೩-೪ ದೇಶಗಳ ಪ್ರವಾಸದ ಪ್ಲಾನ್ ನಡೆಯುತ್ತಿದೆ. ಅದೆಷ್ಟೋ ತಿಂಗಳುಗಲಾದವು, ಒಬ್ಬಳೆ ಹೋಗಿ.ಹಿಂತಿರುಗಿ ಬಂದಮೇಲೆ ನೋಟ್ ಬುಕ್ ತುಂಬಾ ಶಬ್ದಗಳು, ಬ್ಯಾಗ್ ತುಂಬಾ ಕಥೆಗಳಿರುತ್ತವೆ ಎಂದು ನನಗೊತ್ತು.

2 comments:

prashanth kammar said...


WOW!NICE TO SEE YOUR ARTICLE IN KANNADA. GOOD ATTEMPT.

Deepa Bhasthi said...

Thank you Prashanth.