Thursday, August 27, 2015

Preoccupations With Death, Etc: Kannada Prabha Column

There were many reports on assisted dying that I was reading. Then there was the hanging of Yakub Memom. Then Cecil the Lion was killed. My grandmother had passed away some months ago. Death and various questions around it, religious, ethical, political, even economical kept cropping up. So I wrote about it in this week's Binkana column in Kannada Prabha.

Read a slightly unedited version below.

ನಿಜವಾಗಿಯೂ ವ್ರದ್ದಾಪ್ಯದಲ್ಲಿ ಮಜವಿದೆಯೇ?

ಎಪ್ಪತೈದು ವರ್ಷದ ಜಿಲ್ ಫಾರೋ ಎಂಬುವ ನರ್ಸ್ ಕಳೆದ ತಿಂಗಳು ಸ್ವಿಜರ್ಲ್ಯಾಂಡ್ ನ ಒಂದು ಕ್ಲಿನಿಕ್ ನಲ್ಲಿ ನಿಧನರಾದರು. ತಮ್ಮ ಜೀವನವಿಡೀ ಹಿರಿಯರ ಆರೈಕೆ ಮಾಡಿಕೊಂಡಿದ್ದ ಲಂಡನ್ ನಿವಾಸಿ ಜಿಲ್ ಅವರಿಗೆ ವೃದ್ದಾಪ್ಯದ ಭಯವಿತ್ತು. ತನಗೆ ಪಾರ್ಶ್ವವಾಯುವಿನ ಹೊಡೆತ ಅಥವಾ ಇನ್ನ್ಯಾವುದೋ ರೋಗದಿಂದ ಮಲಗಿದಲ್ಲೇ ಆಗಿ ತನ್ನ ಪರಿವಾರದವರಿಗೆ ಹೊರೆಯಾಗಬಾರದು ಎಂದು, ಒಂದೆರಡು ವಯಸ್ಸಿಗೆ ಸಂಬಂದಪಟ್ಟ ತೊಂದರೆಗಳನ್ನು ಬಿಟ್ಟರೆ ಬಹುಪಾಲು ಆರೋಗ್ಯವಂತರಾಗಿದ್ದ ಜಿಲ್ ಬಾಸೆಲ್ ನ ಲೈಫ್ ಸರ್ಕಲ್ ಎಂಬ 'ಸಹಾಯ ಮರಣ' ಕ್ಲಿನಿಕಿನಲ್ಲಿ ಜುಲೈ ೨೧ರಂದು ಆತ್ಮಹತ್ಯೆ ಮಾಡಿಕೊಂಡರು. ಜಿಲ್ ಬರೆದ ಒಂದು ಕೊನೆ ಲೇಖನದಲ್ಲಿ "ವೃದ್ದಾಪ್ಯದಲ್ಲಿ ಮಜವಿದೆ ಎಂದು ನನಗನಿಸುವುದಿಲ್ಲ," ತಾನು ಮೊದಲು ಇಷ್ಟ ಪಡುತ್ತಿದ್ದ ಹೂದೊಟಗಾರಿಕೆ, ಡಿನ್ನರ್ ಪಾರ್ಟೀಸ್, ಇತ್ತ್ಯದಿ ಈಗ ತನಗೆ ಆ ಮೊದಲಿನಂತೆ ಸಂತೋಷ ನೀಡುವುದಿಲ್ಲ ಎಂದು ಬರೆದಿದ್ದರು. ಕಳೆದ ವರ್ಷ ಆನ್ ಎಂಬ ಅದ್ಯಾಪಕಿ ೨೧ನೇ ಶತಮಾನದ ಇಮೇಲ್, ಇಂಟರ್ನೆಟ್, ಮಾರುಕಟ್ಟೆಯಲ್ಲಿ ಸಿಗುವ ರೆಡಿ ಮೇಡ್ ಊಟ, ಇತ್ಯಾದಿಗಳ ಜೊತೆ ಹೊಂದಿಕೊಳ್ಳಲು ತನಗಾಗುವುದಿಲ್ಲ ಎಂದು ಸ್ವಿಜರ್ಲ್ಯಾಂಡ್ ನ ಇನ್ನೊಂದು ಆತ್ಮಹತ್ಯೆ ಕ್ಲಿನಿಕಿನಲ್ಲಿ ತಮ್ಮ ಪ್ರಾಣ ತೆಗೆದುಕೊಂಡರು. ಈ ಅಂಕಣ ಬರೆಯುತ್ತಿರಬೇಕಾದರೆ ಬ್ರಿಟನಿನ ಇನ್ನೊಂದು ನಿವಾಸಿ ಬಾಬ್ ಕೋಲ್ ಚಿಕಿತ್ಸೆ ಮಾಡಲಾಗದಂತಹಾ ರೋಗ ಇರುವುದರಿಂದ ಸ್ವಿಜರ್ಲ್ಯಾಂಡ್ ಗೆ ಪ್ರಯಾಣ ಮಾಡಿ ತಮ್ಮ ಪ್ರಾಣ ತೆಗೆದುಕೊಳ್ಳಲಿದ್ದಾರೆ ಎಂದು ಓದಿದೆ. 

ಬ್ರಿಟನಿನಲ್ಲಿ, ಜಗತ್ತಿನ ಹೆಚ್ಚು ಕಮ್ಮಿ ಎಲ್ಲಾ ದೇಶಗಳಲ್ಲಿ ಇದ್ದಂತೆ, ಈ ಸಹಾಯಕ ಮರಣ, ಆತ್ಮಹತ್ಯೆ, ಯುತನೀಶಿಯದಂತೆ ಕಾನೂನು ಬಾಹಿರ. ಸ್ವಿಜರ್ಲ್ಯಾಂಡ್ ಬೇರೆ ಇನ್ನೆರಡು ದೇಶಗಳನ್ನು ಸೇರುತ್ತದೆ, ಇಂತಹಾ ದಯಾ ಮರಣವನ್ನು ಶಾಸನಕ್ಕೆ ತರುವುದರಲ್ಲಿ. ಈ ಸುಯಿಸೈಡ್ ಕ್ಲಿನಿಕ್ ಗಳ ಸೇವೆಯನ್ನು ಪಡೆಯಲು ಸ್ವಿಸ್ ನಗರೀಕರಾಗಿರಬೇಕಿಲ್ಲ, ಇತ್ತೀಚಿಗೆ ಗುನವಾಗದಂತಹಾ ರೋಗವನ್ನು ಸಹ ಹೊಂದಿರಬೇಕಿಲ್ಲ. ಯಾವ ಕಾನೂನನೂ ಸಹ ಕುಶಲತೆಯಿಂದ ತಿರುಗಿಸಬಹುದಲ್ಲವೇ?

ವೃದ್ದಾಪ್ಯದಲ್ಲಿ ಮಜವಿದೆ ಎಂದು ನನಗನಿಸುವುದಿಲ್ಲ ಎಂಬ ಜಿಲ್ ಬರೆದ ಒಂದು ವಾಕ್ಯದಿಂದಾಗಿ ಜೀವನದ ಪರ ಮತ್ತು ವಿರುದ್ದವಿರುವ ಗುಂಪುಗಳ ಮಧ್ಯೆಯಿನ ಚರ್ಚೆ ಪುನಃ ತಲೆಯೆತ್ತಿದೆ. ಈ ಯುತನೀಶಿಯ ಆಗಲಿ, ಸಹಾಯಕ ಮರಣವಾಗಲಿ, ಕಪ್ಪು ಅಥವಾ ಬಿಳಿ, ಸರಿ ಅಥವಾ ತಪ್ಪು ಎಂದು ಅಚ್ಚುಕಟ್ಟಾಗಿ ವಿಂಗಡಿಸುವಷ್ಟು ಸುಲಭವಲ್ಲ. ಇದರಲ್ಲಿರುವ ನೈತಿಕ, ಸಾಮಾಜಿಕ, ಕಾನೂನಿನ, ವ್ಯದ್ಯಕೀಯ, ಧಾರ್ಮಿಕ, ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳು ವಿಪರೀತ ಗೊಂದಲಗಳನ್ನು ಉಂಟು ಮಾಡುತ್ತವೆ. ಸಾವು ಎಂಬುದೇ ಹೀಗೆ, ಒಂದು ರೀತಿಯ ಅನಾನುಕೂಲತೆ.

ಇತ್ತೀಚಿಗೆ ನನ್ನ ಬೇರೆ ಹಲವಾರು ಬರವಣಿಗೆಗಳು, ಚಿಂತನೆಗಳು ಸಾವಿನ ಕುರಿತಾಗಿ, ದೇಹದ ಕುರಿತಾಗಿ ಜರುಗುತ್ತಿವೆ. ಉದ್ದೇಶಪೂರ್ವಕವಾಗಿ ಖಂಡಿತವಾಗಿಯೂ ಅಲ್ಲ. ಆಕಸ್ಮಿಕ ಆಸಕ್ತಿಯಷ್ಟೇ. ಕೆಲ ತಿಂಗಳುಗಳ ಹಿಂದೆ ನಾನು ಚಿಕ್ಕವಳಾಗಿದ್ದಾಗ ದಿನಕ್ಕೆ ಕಡ್ಡಾಯವಾಗಿ ಎರಡು ಮೂರು ಕಥೆಗಳನ್ನು ಹೇಳಿಸಿಕೊಳ್ಳುತ್ತಿದ, ನಮ್ಮೊಟ್ಟಿಗೆ ಇದ್ದ ಅಜ್ಜಿ ಅದೆಷ್ಟೋ ತಿಂಗಳು ಮಲಗಿದಲ್ಲೇ ಆಗಿ ತೀರಿಹೋದರು. ಬಹುಷಃ ಸಾವಿನ ಬಗ್ಗೆಗಿನ ಈ ವಿಮರ್ಶೆ ಅಲ್ಲಿಂದ ಶುರುವಾಯಿತೋ ಏನೋ, ಸರಿಯಾಗಿ ಹೇಳಲಾರೆ. ಈ ಅಂತರದ ಹಲವಾರು ತಿಂಗಳುಗಳಲ್ಲಿ ಅವಿರೂಕ್ ಸೇನ್ ನ ಅದ್ಭುತವಾಗಿ ಸಂಶೋಧಿಸಿ ಬರೆದ 'ಆರುಷಿ' ಪುಸ್ತಕವನ್ನು ಓದಿದೆ. ದೇಶವನ್ನೇ ಮೋಡಿಮಾಡಿಸಿ ಹಿಡಿದಿಟ್ಟ ಆರುಷಿ ತಲ್ವಾರ್ ಮತ್ತು ಹೇಮರಾಜ್ ಹತ್ಯೆಯ ನಂತರ ವರ್ಷಾನುಗಟ್ಟಲೆ ನಡೆದ ಕೇಸಿನಲ್ಲಿ ಸಿಬಿಐನ ಸಂಶೋಧನಾ ತಂಡ ಮಾಡಿದ ಘೋರ ತಪ್ಪುಗಳನ್ನು ಸೇರಿದಂತೆ ಇಡೀ ವಿಚಾರಣೆಯಲ್ಲಿ ಏನೇನು ನಡೆಯಿತು, ಸಾಕ್ಷಿಗಳನ್ನು ಹೇಗೆ ಬದಲಾಯಿಸಲಾಯಿತು ಎಂಬ ವಿವರಣೆ ಇದರಲ್ಲಿದೆ. ತುಂಬಾ ಗೊಂದಲವನ್ನು ಉಂಟುಮಾಡುವ ಪುಸ್ತಕ. ಅದನ್ನು ಓದುತ್ತಿದಂತೆ ಕೇಳಿದ ಇನ್ನೊಂದು ಸುದ್ದಿ, ಅಮೇರಿಕಾದ ಒಬ್ಬ ದಂತ ವೈದ್ಯ ಐವತ್ತು ಸಾವಿರ ಡಾಲರ್ ಕೊಟ್ಟು ಬೇಟೆಯಾಡುವ ಲೈಸೆನ್ಸ್ ಖರೀದಿಸಿ ಸೆಸಿಲ್ ಎಂಬ ಬಹಳ ಜನಪ್ರಿಯವಾದ ಗಂಡು ಸಿಂಹವನ್ನು ಜಿಂಬಾಬ್ವೆ ನಲ್ಲಿ ವಿನೋದಕ್ಕೆಂದು ಬಿಲ್ಲು ಬಾಣದಿಂದ ಕೊಂದುಹಾಕಿದ ಎಂಬುದು. ಮತ್ತದೋ ರಿಯಾಲಿಟಿ ಟೀವಿಯಲ್ಲಿ ಈ ಸೀಸನ್ ಸ್ಪೆಷಲ್ ಎಂಬುವ ಹಾಗೆ ಉದ್ರೇಕವಾಗಿ ಯಾಕುಬ್ ಮೆಮೊನಿನ ಮರಣದಂಡನೆಯ ವರದಿಗಳು. ದಾರಿಯಲ್ಲಿ ಈ ಪ್ರಸಂಗಗಳಷ್ಟು ವಿವಾದಕ್ಕೊಳಗಾಗದ ಅದೆಷ್ಟೋ ಬೇರೆ ಘಟನೆಗಳು.

ಈ ಎಲ್ಲಾ, ಇಲ್ಲಿ ಹೇಳದ ಮತಷ್ಟು ಸಾವುಗಳ ಸುತ್ತ ಸುಳಿದಾಡುವ ಪ್ರಶ್ನೆ ದೇಹದ್ದು. ನಮ್ಮೆಲರ ಈ ದೇಹ ನಮಗೆ ಸೇರಿದ್ದಾ ಅಥವಾ...ಉತ್ತರ ಕಪ್ಪು-ಬಿಳುಪಿನಷ್ಟು ಸುಲಭವಲ್ಲ. ಹೆಣ್ಣೆಂಬ ಪ್ರಾಣಿಯ ದೇಹ ಒಂದು ರಾಜಕೀಯ ಭೂ ವ್ಯವಸ್ತೆಯಾಗಿ ಆ ಅಗೋಚರ, ವ್ಯಕ್ಯಾನಿಸಲಾಗದಂತಹಾ ಸಮಾಜ, ಅದೊಬ್ಬ ರಾಜಕಾರಣಿ, ಫ್ಯಾಷನ್ ನಲ್ಲಿರುವ ಅದ್ಯಾವುದೋ ಸ್ವಾಮಿ/ಬಾಬಾ, ಗಂಡ/ಹೆಂಡತಿ, ಪಾರ್ಟ್ನರ್, ಕುಟುಂಬದ ಒಂದಿಷ್ಟು ಜನಮಂದಿಯ ಸ್ವತ್ತು ಎಂದೆನಿಸಿಕೊಳ್ಳಲಾಗುತ್ತದೆ. ಅದೇ ಹೆಣ್ಣು ತಂತನವನ್ನು ಹಿಂದೆ ಬಾಚಿಕೊಂಡರೆ ಅವಳ ಹೆಸರು ಬೇರೆಯೇ ಕರೆಯಲ್ಪಡುತ್ತದೆ. ಕಾಡಿನಲ್ಲಿರುವ ಪ್ರಾಣಿಯ ದೇಹದ ಮೇಲಿರುವ ಹಕ್ಕು ಹರಾಜಿನಲ್ಲಿರುವ ಕೊಟ್ಯಾದಿಪತಿಗೆ ಸೇರುತ್ತದೆ.

ದೇಹ ನಮ್ಮದಾದರೆ ಏನನ್ನೂ ಅದರೊಟ್ಟಿಗೆ ಮಾಡಬಹುದೆ? ಅಲ್ಲವಾದಲ್ಲಿ ನಮ್ಮ ದೇಹದ ಮೇಲಿನ ಹಕ್ಕು ಎಷ್ಟರ ಮಟ್ಟಿಗೆ ನಮ್ಮದು? ದಿನದಿಂದ ದಿನಕ್ಕೆ ಈ ಪ್ರಶ್ನೆಗೆ ಕಲ್ಪಿಸುವ ನಿರಂತರ ಉತ್ತರಗಳಿಂದಲೇ ದಿನಚರಿಯನ್ನು ವ್ಯವಹರಿಸಬೇಕಾಗುತ್ತದೆ. ಹದಿನೆಂಟನೆ ಶತಮಾನದ ಜಾನ್ ಲಾಕ್ ಎಂಬುವ ಇಂಗ್ಲಿಷ್ ತತ್ವಜ್ಞಾನಿ ಲಾ ಆಫ್ ನ್ಯಾಚುರಲ್ ರೈಟ್ಸ್ ಬಗ್ಗೆ ಹೇಳುತ್ತಾ, ಪ್ರತಿಯೊಂದು ಮನುಷ್ಯನಿಗೂ ಜೀವ, ಸ್ವಾತಂತ್ರ ಮತ್ತು ಸ್ವತ್ತಿನ ಮೇಲೆ ಸಹಜವಾದ ಹಕ್ಕಿದೆ ಎನ್ನುತ್ತಾನೆ. ಆದರೆ, ಅವನ ಪ್ರಕಾರ, ಇಲ್ಲಿರುವ ಒಂದೇ ಒಂದು ನಿರ್ಭಂದವೇನೆಂದರೆ ಈ ಸಹಜ ಹಕ್ಕುಗಳನ್ನು ನಾವು ಬಿಟ್ಟುಕೊಡುವಂತಿಲ್ಲ, ಮತ್ತು ಅವುಗಳನ್ನು ಬೇರೆಯವರಿಂದ ಕಿತ್ತುಕೊಳ್ಳುವಂತಿಲ್ಲ. ಕ್ಲಾಸಿಕಲ್ ಲಿಬರಲಿಸಂನ ತಂದೆಯೆಂದು ಕರೆಲ್ಪಡುವ ಲಾಕ್ ದುಡಿಮೆ, ಅದರಿಂದ ಬರುವ ಸ್ವತ್ತು ಇತ್ತ್ಯದಿಯ ಬಗ್ಗೆ ಬೇರೆ ಅದೆಷ್ಟೋ ಹೇಳುತ್ತಾನೆ. ತಿಳಿದಂತಹಾ ಎಲ್ಲಾ ಧರ್ಮಗಳು ಜೀವ -ಸ್ವಾತಂತ್ರ- ಸ್ವತ್ತಿನ ಬಗ್ಗೆ ಅಭಿಪ್ರಾಯವನ್ನು ಹೊಂದಿರುತ್ತವೆ. ರಾಜಕೀಯದ ವಿವಿಧ ವ್ಯವಸ್ತೆಗಳೂ ಅಷ್ಟೇ.

ಒಂದು ಜೀವ/ದೇಹ ಮತ್ತು ಅದನ್ನು ಸುತ್ತುವರಿಯುವ ರಾಜತತ್ವವನ್ನು ಎದುರಿಟ್ಟು ನೋಡಿದಾಗ ಬರುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರ್ಯ್ಯರು? ನಮ್ಮ ದೇಹ ನಮ್ಮ ಜೀವನ ನಮ್ಮದಾದರೆ ಸಹಾಯಕ ಮರಣದ ವಿರುದ್ದ ಗುಂಗೀರಿಸಬೇಕಾದ ಅವಶ್ಯಕತೆ ಏನಿದೆ? ದೇಹ/ಜೀವನ ಕೇವಲ ತುಂಡುಗಳಲ್ಲಷ್ಟೇ ನಮ್ಮದಾದರೆ ಸರ್ಕಾರದ್ದು ಅದರಲ್ಲಿ ಪಾಲಿದೆಯೇ? ಇಲ್ಲವಾದಲ್ಲಿ ಅದನ್ನು ಕಿತ್ತುಕೊಳ್ಳುವ ಹಕ್ಕು ಅದಕ್ಕೆ ನೀಡಿದವರಾರು?

ಅಹಿತವಾದ ಪ್ರಶ್ನೆಗಳಿಗೆ ಹುಡುಕುವ ಉತ್ತರ ಕಪ್ಪು-ಬಿಳುಪಿನಷ್ಟು ಸುಲಭವಲ್ಲ.

No comments: