Tuesday, December 22, 2015

When Growing Your Own Food is the Way You Protest: Binkana Column in Kannada Prabha

This friend and I, we try to grow a bit of our own food. There is just something so magical about growing your own food, however little. 
I mean to write about our farm, soon, here. 
Until then, in my new Binkana column in Kannada Prabha, I write on how it is the miniscule revolution that you call for when you try to grow your own food.

Published Dec 13, 2015.

ಪ್ರಳಯವೆಂಬಂತೆ ಸುರಿದ ಮದ್ರಾಸ್ ಮಳೆಯ ವಿಷಯವಲ್ಲ ಇದು.

ಅದೇ ಸಮಯದಲ್ಲಿ, ಈ ಊರು ಬೆಂಗಳೂರಿನಲ್ಲಿಯೂ ಸಹ ಧೋ ಎಂದು ಸುರಿಯುತ್ತಿರುವ ಮಳೆಗೆ - ಮಧ್ಯದಲ್ಲಿ ಕವಿತೆ ಕಾದಂಬರಿಯಲ್ಲಿ ಮೂಡಿಬರುವ ತುಂತುರು, ಹುಡಿ ಮಳೆಯೂ ಇತ್ತಲ್ಲವೇ? - ನಮ್ಮ ಫಾರ್ಮ್ ಸೋತುಹೋದಂತಿದೆ. ಟೊಮೇಟೊ ಗಿಡಗಳು ಅದ್ಯಾವುದೋ ಬಿಳಿ ಪೌಡರ್ ರೋಗದಿಂದ ಒದ್ದಾಡುತ್ತಾ ಇದ್ದರೆ, ಬೆಂಡೇಕಾಯಿ ಬೇಕೋ ಬೇಡವೋ ಅನ್ನುವ ಹಾಗೆ ಕಾಣುತ್ತಿವೆ. ಕುಂಬಳಕಾಯಿಗಳ ಗಿಡಗಳು ಅದೇನೋ ಇರಲಿ ಎಂದು ಬೆಳೆಯುತ್ತಿದರೆ, ಪಾಲಕ್ ಸೋಪ್ಪಂತೂ ನಾ ಒಲ್ಲೆ ಎಂದೇ ಹೇಳಿ ಕೂತಂತಿವೆ. ವಿದೇಶಿ ಪಾಕದಲ್ಲಿ ಬಳಸುವ ಬೇಸಿಲ್, ತ್ಯಂ, ರೋಜ್ ಮೇರಿ ಸೊಪ್ಪುಗಳು ತೊಂದರೆ ಇಲ್ಲ. ಬಹುಷಃ ಇದೇನೋ ಬೇರೆ ದೇಶದ ಹವೆಯೇ ಹೀಗೆ, ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳೋಣ ಎಂದು ಅಂದುಕೊಂಡವೊ ಏನೋ. ಬೀನ್ಸ್ ಗಿಡಗಳೊಂದೆ ಹವೆ ಹೇಗೆ ಇರಲಿ, ನಾವು ನಮ್ಮ ಕೆಲಸ ಮಾಡಬೇಕೆಂಬ ಕಾಯಕವೇ ಕೈಲಾಸದ ಸಿದ್ಧಾಂತವನ್ನು ಪಾಲಿಸುತ್ತಿವೆ. ಹೀಗಿದ್ದರು ಒಟ್ಟಿನಲ್ಲಿ ನಮ್ಮ ಫಾರ್ಮ್ ಖುಷಿ ಖುಷಿಯಾಗಿಲ್ಲ, ಎತ್ತರ ಬೆಳೆದ ಹಸಿರಿದ್ದರೂ ಆ ಹಸಿರಿನಲ್ಲಿ ಒಂದು ರೀತಿಯ ಗೆಲುವು ಕಾಣುತ್ತಿಲ್ಲ.

ಹೆಚ್ಚು ಕಮ್ಮಿ ಪ್ರತಿ ದಿನ ಸಂಜೆ ಅಲ್ಲಿ ಕುಳಿತು ಪಕ್ಕದ ಕೆರೆ, ಅದರ ಸುತ್ತ ವಾಕ್ ಹೋಗುವವರನ್ನು ನೋಡಿಕೊಂಡು ಟೀ ಕುಡಿಯುವ ಸಂಪ್ರದಾಯವನ್ನು ಶುರುಮಾಡಿಕೊಂಡಿದ್ದೇವೆ. ಆದರೆ ಮೊದಲು ಮಳೆಯಾಯಿತು. ಅದರ ಬೆನ್ನೇರಿ ಬಂದ ಚಳಿಗಾಲ, ಈ ದಿನಗಳಲ್ಲಿನ ಖಾರ ಬಿಸಿಲು ನಮ್ಮ ಫಾರ್ಮ್ ಅನ್ನು ಸಪ್ಪೆ ಮಾಡಿದೆ. ಒಂದೆರಡು ಟೊಮೇಟೊ, ಒಂದು ಹಿಡಿ ಬೀನ್ಸ್ ಸಿಕ್ಕಿದರೂ...

ನಾಲ್ಕು ಅಂಗೈಯಷ್ಟು ಅಗಲ ಫಾರ್ಮ್ ನಮ್ಮದು, ಮನೆಯ ಟೆರೇಸಿನ ಮೇಲೆ. ಹವಾಮಾನದ ಏರು ಪೇರು ಈ ಪುಟ್ಟ 'ಫಾರ್ಮ್'ನ ಮೇಲೆ ಇಷ್ಟು ಪರಿಣಾಮ ಬೀರಿದರೆ ಬೇಸಾಯವನ್ನೇ ನಂಬಿರುವ ರೈತರ ಕಥೆ ಅದೇನು? ಮಾತಾಡಿಕೊಳ್ಳುತ್ತೇವೆ, ನಾವು ಭಾಗ್ಯವಂತರು, ದಿ ಪ್ರಿವಿಲೆಜೆಡ್ ಎಂದು. ಸಾವಯವ ತರಕಾರಿ ಬೆಳೆಸುವುದು, ಅದನೆ ನಂಬಿದ ಜೀವನ ಇಲ್ಲದಿರುವುದು, ಬೇಕಾದಷ್ಟು ನೀರು ಹಾಕಬಲ್ಲ ಸಾಮರ್ತ್ಯ - ಕೃಷಿಯಲ್ಲಿ ಇದೊಂದು ರೀತಿಯ ಐಶೊ ಆರಾಮು ಲೈಫ್ ಸ್ಟೈಲ್.

ಈ ಸವಲತ್ತಿನ ಅರಿವು, ಇದರಿಂದ ಬರುವ ಸೌಲಭ್ಯಗಳನ್ನು ಸ್ವೀಕರಿಸುವ ಅಭ್ಯಾಸ ಚೆನ್ನಾಗಿಯೇ ಆಗಿದೆ. ಫಾರ್ಮಿನಲ್ಲಿ ಕುಳಿತು ಟೀ ಕುಡಿಯುತ್ತಿರುವಾಗ ಈ ವಿಪರ್ಯಾಸವನ್ನು ಗಮನಿಸಿ ಮುಂದೆಹೊಗುವುದುಂಟು. ಆ ಉಳಿದವರಿರುವರಲ್ಲ, ಅವರಿಗೆಲ್ಲಿ ಮೊನ್ಸಂಟೊವನ್ನು ಎದುರಿಸುವ ತಾಳ್ಮೆ, ಸಂಪತ್ತು, ಶಕ್ತಿ ಅದೆಲ್ಲಿ? ನಮಗಿದೆಲ್ಲ ಇದೆ ಎಂಬ ಅಹಂಕಾರ ಖಂಡಿತ ಅಲ್ಲ. ಆದರೆ ಜೀವನ ಭೂಮಿ - ಮಳೆ - ಬೀಜದ ಸೂಕ್ಷ್ಮ ಸಂಕೋಲೆಯಲ್ಲಿ ಬಂದಿಯಾಗಿ ಇಲ್ಲದಿರುವಾಗ ಜಿಎಮ್ ಗೆ, ಮಣ್ಣನ್ನು ಕರಗಿಸುವ ವಿಷಕ್ಕೆ, ಕೃಷಿಯಲ್ಲಿ ಬಂಡಾಯಶಾಹಿತ್ವದ ಇನ್ನಿತರ ಗುಣಲಕ್ಷಣಗಳಿಗೆ "ಇಲ್ಲ" "ಬೇಡ" ಎನ್ನುವುದು ಸುಲಭ.

ಜೆನೆಟಿಕಲಿ ಮಾಡಿಫ಼್ಯ್ (ಜಿಎಮ್) ಮಾಡಿದ ಆಹಾರ ಒಳ್ಳೆಯದೋ, ಕೆಟ್ಟದ್ದೋ, ಜನರು ತಿನ್ನಬಹುದ, ತಿಂದರೆ ಅವು ಮನುಷ್ಯರ ಜೆನೆಟಿಕ್ಸ್ ಮೇಲೆ ಏನು ಪರಿಣಾಮ ಬೀರಬಹುದು, ಜಗತ್ತಿನೆಲ್ಲೆಡೆ ಕೃಷಿಯ ಸ್ತಿತಿ ಚಿಂತಾಜನಕವಾಗಿರಬೇಕಾದರೆ, ಕ್ಲೈಮೇಟ್ ಚೇಂಜ್ ಗೆಂದೆ ರಾಷ್ಟ್ರಗಳು ವರ್ಷಕ್ಕೆ ಹತ್ತು ದಿನ ಪ್ರತ್ಯೇಕವಾಗಿ ಮೇಸಲಿಡಬೇಕಾದರೆ ಇದೆಲ್ಲದರ ಮೇಲೆ ಜಿಎಮ್ ಆಹಾರದ ಪರಿಣಾಮವೇನು - ಹೀಗೆ ರೈತ ಸಂಘಟನೆಗಳ, ವಿಜ್ಞಾನಿಗಳ, ಪರಿಸರವಾದಿಗಳ ಮಧ್ಯೆ ಉತ್ತರ-ಪ್ರತ್ಯುತ್ತರದ ಚಕಮಕಿ ನಡೆಯುತ್ತಾ ಬಂದಿದೆ, ಅದೆಷ್ಟೋ ವರ್ಷಗಳಿಂದ. ಹೊಸದೊಂದೇನೆಂದರೆ, ಜಿಎಮ್ ಬೆಳೆಯಿಂದ ತಯಾರಿಸಿದ ಆಹಾರದ ಪ್ಯಾಕೆಟ್ ಗಳ ಮೇಲೆ ಜಿಎಮ್ ನ ಲೇಬಲ್ ಹಾಕಬೇಕೆ ಎನ್ನುವ ಚರ್ಚೆ ಅಮೇರಿಕಾದಲ್ಲಿ ನಡೆಯುತ್ತಿದೆ.

ಯಾವುದೇ ಒಂದು ಪದಾರ್ಥವನ್ನು 'ಆರ್ಗಾನಿಕ್', 'ನ್ಯಾಚುರಲ್' 'ಹ್ಯಾಂಡ್ ಮೇಡ್' ಎಂದು ಲೇಬಲ್ ಮಾಡುವುದರಿಂದ ಅದಕ್ಕೆ ಒಂದು ಪ್ರೀಮಿಯಂ ಬೆಲೆ ಅಂಟಿಕೊಳ್ಳುತ್ತದೆ. ಅಮೇರಿಕಾದಲ್ಲಿ ಅದೆಷ್ಟೋ ಆಹಾರ ತಯಾರಕರು ಅವರ ಪ್ಯಾಕೆಟ್ ಗಳಲ್ಲಿ 'ಜಿಎಮ್-ರಹಿತ' ಎಂಬ ಲೇಬಲನ್ನು ಹಾಕುತ್ತಿದ್ದು, ಇದರರ್ಥ ಈ ಆಹಾರ ಸಾವಯವ ಎಂದಲ್ಲ ಎಂಬುದು ಸಾವಯವ ರೈತ ಸಂಘಟನೆಗಳ ವಿವಾದ. ಸಾವಯವ ಎಂದರೆ ನಾನ್-ಜಿಎಮ್, ನಾನ್-ಜಿಎಮ್ ಎಂದರೆ ಸಾವಯವವಾಗಿರಬೇಕಿಲ್ಲ ಎಂಬುದು ಇಲ್ಲಿನ ತರ್ಕ. ಇನ್ನೊಂದೆಡೆ ಜಿಎಮ್ ಬಳಸಿ ಬೆಳೆಸಿದ ವಸ್ತುಗಳಿಗೆ ಇದರಲ್ಲಿ ಜಿಎಮ್ ಇದೆ ಎಂಬ ಲೇಬಲ್ ಹಾಕುವುದನ್ನು ಕಡ್ಡಾಯ ಮಾಡದೆ ತಯಾರಿಸುವ ಖಾರಖಾನೆಗಳ ಸ್ವಇಚ್ಚೆಗೆ ಬಿಡಬೇಕೆಂಬ ಕಾನೂನನ್ನು ವರ್ಷ ಮುಗಿಯುವ ಮುನ್ನ ಮೆತ್ತಗೆ ತರಬೇಕೆಂಬ ಪಿತೂರಿ ಅಮೆರಿಕಾದ ಜಿಎಮ್-ಪರ ಆಹಾರ ಉಧ್ಯಮಿಗಳು ನಡೆಸುತ್ತಿದ್ದಾರೆ.

ಭಾರತದಲ್ಲಿ ಜಿಎಮ್ ಲೇಬಲ್ ಖಡ್ಡಾಯವಾಗಿ ಹಾಕಲೇಬೇಕು.ಜಿಎಮ್ ವಿವಾದ ನಮ್ಮಲ್ಲಿ ಅಮೆರಿಕಾದಷ್ಟು ಚಿಂತಾಜನಕವಾಗಿಲ್ಲ, ಇಷ್ಟರವರೆಗೆ. ಆದರೆ ಈ ಲೇಬಲ್ ಗಳ ರಾಜಕೀಯ ಸಾವಯವದ ವಿಷಯದಲಿ ಸ್ಪೊಟವಾಗಲು ಕಾದುಕೂತಂತಿದೆ. ಆರ್ಗಾನಿಕ್ ಅಥವಾ ಸಾವಯವ ಎಂದು ಹೆಸರಿಡಬೇಕಾದರೆ ಅದೆಕ್ಕೆ ಸರ್ಟಿಫಿಕೇಟ್ ಗಳು ಬೇಕಾಗುತ್ತವೆ, ಬೆಳೆಸುವ ಭೂಮಿಗೆ ಇದು ಕನಿಷ್ಠ ಮೂರು ವರ್ಷಗಳ ಪ್ರಕ್ರಿಯೆ. ಆಹಾರ ದರ್ಜೆಯಲ್ಲಿ 'ನ್ಯಾಚುರಲ್' ಎಂಬ ಪದಕ್ಕೆ ವಿಶೇಷ ಅರ್ಥವೆನಿಲ್ಲ. 'ಹ್ಯಾಂಡ್ ಮೇಡ್' ಎಂಬುದನ್ನು ನಂಬಿಕೆಯ ಮೇರೆಗೆ ಉಪಯೋಗಿಸಬಹುದೇ ವಿನಃ ಅದನ್ನು 'ಅಫೀಷಿಯಲ್' ಆಗಿ ಮಾನ್ಯ ಮಾಡಬೇಕಾದರೆ ಅದಕ್ಕಿನಷ್ಟು ಕ್ರಮ. ಇಂಗ್ಲಿಷ್ ನಲ್ಲಿ ಒಂದು ಗಾದೆಮಾತಿದೆ, ಅಕ್ಷರಶಃ ಅನುವಾದಿಸಿ, ಒಂದು ಚಿಟಿಕೆ ಉಪ್ಪಿನ ಜೊತೆ ಎಂದು. ಅಂದರೆ ಸೂಪರ್ ಮಾರ್ಕೆಟ್, ಮಾಲ್ ಅಥವಾ ಪಕ್ಕದ ಆರ್ಗಾನಿಕ್ ಅಂಗಡಿಗಳಲ್ಲಿ ನೈಸರ್ಗಿಕ ಸಾವಯವ ವಸ್ತುಗಳನ್ನು ಕೊಳ್ಳುವಾಗ, ಅವುಗಳ ಮೇಲಿನ ನಂಬಿಕೆ ಒಂದು ಚಿಟಿಕೆ ಉಪ್ಪಿನ ಜೊತೆ ಬರಲಿ, ಕೊಂಚ ಜಾಗ್ರತೆಯಿಂದ.

ಮತ್ತೆ ನಮ್ಮ ಫಾರ್ಮಿನ ನೆನಪು. ನಮ್ಮದು ಸರ್ಟಿಫಿಕೇಟ್ ಇಲ್ಲದ ಸಾವಯವ ಹೂದೋಟ. ಈ ಎಲ್ಲಾ ಆಹಾರ, ಕೃಷಿಯನ್ನು ಮುತ್ತುವರಿದ ರಾಜಕೀಯದ ಮಧ್ಯೆ ಬೇಕೆಂದಾಗ ಟೆರೇಸಿನ ಬಾಗಿಲು ತೆರೆದು ಒಂದೆರಡು ಹಸಿ ಮೆಣಸು, ಒಗ್ಗರಣೆಗೆ ಬೇಕಾದಷ್ಟು ಕರಿಬೇವು, ಸಲಾಡಿನ ಮೇಲೆ ಉದುರಿಸಲು ನಾಲ್ಕು ಬೇಸಿಲ್ ಸೊಪ್ಪು, ಈ ಚಟುವಟಿಕೆಯೇ ನಮ್ಮಮನೆ ಮಟ್ಟಿನ ಹೋರಾಟ, ಈ ಜಿಎಮ್, ಅದನ್ನು ಮಾರುವ, ಅಲ್ಲ, ರೈತರ ಗಂಟಲಿಗೆ ತುರುಕಿಸುವ ಉಧ್ಯಮಿಗಳ ವಿರುದ್ದ.

ನಮ್ಮ ಆಹಾರವನ್ನು ಆದಷ್ಟು ಬೆಳೆಸುವುದು - ಕೈಲಾದಷ್ಟು, ಜಾಗ ಇದ್ದರೆ, ಶರತುಗಳು ಅನ್ವಯ - ಈ ಭೂಮಿಗೋಸ್ಕರ, ನಮ್ಮ ದೇಹಕ್ಕೊಸ್ಕರನಾವು ಪಾಲ್ಗೊಳ್ಳಬಹುದಾದ ಒಂದು ಕ್ರಾಂತಿ.

No comments: